¡Sorpréndeme!

2017ರಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ 20 ಪ್ರಮುಖ ಘಟನೆಗಳು | Filmibeat Kannada

2017-12-13 621 Dailymotion

Highlights of Kannada film industry in 2017. Here is the yearly report of Sandalwood. Watch Video to know about the 20 incidents that happened in Kannada Film Industry.

ಚಿತ್ರರಂಗ ಬಣ್ಣದ ಜಗತ್ತು. ಈ ಮಾಯಾ ಜಗತ್ತಿನಲ್ಲಿ ದಿನಕ್ಕೊಂದು ಬೆಳವಣಿಗೆಗಳು ಆಗುತ್ತಲ್ಲೇ ಇರುತ್ತದೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ವರ್ಷ ಸಾಕಷ್ಟು ಘಟನಾವಳಿಗಳು ನಡೆದಿದೆ. 2017ರಲ್ಲಿ ಸಾಕಷ್ಟು ಬೆಳವಣಿಗೆಗಳು ಕನ್ನಡ ಸಿನಿಮಾರಂಗದಲ್ಲಿ ಆಗಿದೆ. ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ, ಉಪ್ಪಿ ಪ್ರಜಾಕೀಯ, ಕಿರಿಕ್ ಪಾರ್ಟಿ 100 ದಿನ, ಪೋಷಕ ನಟರ ಸರಣಿ ನಿಧನ, ಸ್ಟಾರ್ ಗಳ ಮದುವೆ ಸಂಭ್ರಮ, ದಂಡುಪಾಳ್ಯ ಬೆತ್ತಲೆ ವಿವಾದ, ನಿರ್ಮಾಣಕ್ಕೆ ಇಳಿದ ಪುನೀತ್ ಮತ್ತು ಶಿವಣ್ಣ, ಸಾಲು ಸಾಲು ಸದಭಿರುಚಿಯ ಸಿನಿಮಾಗಳು, ಡಬ್ಬಿಂಗ್ ಗಲಾಟೆ ಹೀಗೆ ಕನ್ನಡ ಚಿತ್ರರಂಗದ ಏನೇನೋ ನಡೆದು ಬಿಟ್ಟಿದೆ.ಅಂದಹಾಗೆ, ಈ ಜನವರಿಯಿಂದ ಡಿಸೆಂಬರ್ ವರೆಗೆ ಕನ್ನಡ ಚಿತ್ರರಂಗದಲ್ಲಿ ಆದ ಕೆಲವು ಪ್ರಮುಖ ಬೆಳವಣಿಗೆಗಳ ಬಗ್ಗೆ ಒಂದು ವಿಶೇಷ ವರದಿ. ಕಳೆದ ವರ್ಷ ಡಿಸೆಂಬರ್ 30ಕ್ಕೆ ರಿಲೀಸ್ ಆಗಿದ್ದ 'ಕಿರಿಕ್ ಪಾರ್ಟಿ' ಸಿನಿಮಾ 2017ರಲ್ಲಿ ನೂರು ದಿನ ಪೂರೈಸಿದ ಮೊದಲ ಸಿನಿಮಾವಾಗಿದೆ.